ಮಿರಾಕಲ್  ಫಾರೆಸ್ಟ್‌ ಚಾಲೆಂಜ್‌

ದಿನಾಂಕ 27-08-2023 ಭಾನುವಾರದಂದು ಮಿಯವಾಕಿ ಅರಣ್ಯವನ್ನು ಬೆಳೆಸುವ ಉಚಿತ ಆನ್‌ಲೈನ್ ತರಬೇತಿಯ ಕಾರ್ಯಗಾರವನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ ಉಡುಪಿ ಇವರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ಖ್ಯಾತ ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್‌ ಇವರು ಸಹ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥತರಿದ್ದರು. ಈ ಕಾರ್ಯಗಾರವು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು ಕಾಡಿನ ಸ್ಥಿತಿ, ಹೆಚ್ಚುತ್ತಿರುವ ತಾಪಮಾನ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ನಶಿಸಿಹೋಗುತ್ತಿರುವ ಜೀವವೈವಿದ್ಯಗಳ ಉಳಿವಿಗಾಗಿ ಪರಿಸರ ಸಂರಕ್ಷಣೆಯನ್ನು ಮಾಡುವುದರ ಬಗ್ಗೆಯಾಗಿತ್ತು. ನಮ್ಮ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ 100 ಸ್ವಯಂಸೇವಕರು ಭಾಗಿಯಾಗಿದ್ದರು. ಅದರೊಂದಿಗೆ ಇತರ 50 ಜನರು ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಒಳ್ಳೆಯ ಸಂದೇಶದೊಂದಿಗೆ ಶ್ರೀ ಕೆ. ಮಹೇಶ್‌ ಶೆಣೈಯವರು ನೆರವೇರಿಸಿಕೊಟ್ಟರು. ಈ ರೀತಿಯಲ್ಲಿ ಆನ್‌ಲೈನ್ ತರಬೇತಿಯು ಒಳ್ಳೆಯ ರೀತಿಯಲ್ಲಿ ಪೂರ್ಣಗೊಂಡಿತು.

Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us