ಚಿಟ್ಟೆಯಾಗಬೇಕಿದೆ ನನಗೆ

ಚಿಟ್ಟೆಯಾಗಬೇಕಿದೆ ನನಗೆ
ರೆಕ್ಕೆ ತುಂಬಾ ಕಣ್ಣ ಕೋರೈಸುವ ಬಣ್ಣ
ಮುಟ್ಟಲಾರದಂತೆ ಹಾರಿ ಏರುವ ಬಗೆಗೆ
ಆಗಸವೇ ಬೆರಗಾಗಿ ನೋಡಲಿದೆ ನನ್ನ..
ನಾನೊಂದು ನಿರುಪದ್ರವಿ ಕಂಬಳಿಹುಳ
ಎಗರಲಾರೆನು ಎಂದೂ ನಾನಾಗಿ ಮೈಮೇಲೆ
ನೀವಾಗಿ ಮುಟ್ಟಿದರೆ ಗತಿ ಮತಿಯು ಎರಡಿಲ್ಲ

ಉಗುರು ಕಿತ್ತುರಿವಂತೆ ಪರಚಿಕೊಳ್ಳುವಿರಲ್ಲೆ
ಬದುಕು ತಾ ನೀಡುವುದು ಸಂಘರ್ಷಗಳ ಸರಮಾಲೆ
ಮೇಲೆನಗೆ ಆತುರವಿಲ್ಲ ಮೂಡಿಸುವುದಕೆ ಸುಳಿ
ಆದರೂ ಈಗೀಗ ಮಿತಿಮೀರಿದ ನಿನ್ನ ಅಹಂಮಿಗೆ
ಮಸೆಯುತಿರುವೆನು ರೋಮ‌ ನೋಡಲೇಬೇಕಿದೆ ಒಮ್ಮೆ ತುರಿಕೆ ಹಚ್ಚಿ

ಬಗೆ ಬೇರೆಯಾಗಲಿದೆ ನನ್ನ ಹುಳವೆಂದು ಬಗೆದರೆ
ದಾಳ ಬದಲಾಗಲಿದೆ ಕಾಯುತಿದೆ ಸಮಯ
ಈ ಬಾರಿ ನಾನಿದ್ದು ಹೆಣೆದಿರುವ ಈ ಬಲೆಗೆ
ನೀ ಬಿದ್ದು ಬಲಿಯಾಗುವುದ ಬಯಸುತಿದೆ ಹೃದಯ
ನಾಳೆ ಎಂಬುದು ನಿನ್ನ ಸ್ವಂತಿಕೆಯ ನಿಧಿಯಲ್ಲ
ಭಯವರಿತು ನಿನ್ನ ಮುಖದಿ ಮಾಯವಾಗಲಿದೆ ನಗೆ
ಕೊನೆಯಾಗಲಿದೆ ನಿನ್ನೊಳಗಿನ ಆ ಅಸೂಯೆಯೆಲ್ಲ
ಏಕೆಂದರೆ ಜಗದ ಕಣ್ಣರಳಿಸುವ ಚಿಟ್ಟೆಯಾಗಲಿದೆ ನನಗೆ

Dr Prajna Marapalli
Assistant Professor
Department of Kannada
Sri Poornaprajna Evening College, Udupi-576101
Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us