ಕ್ಷಣಕ್ಷಣವೂ ಅರಿವು ಅನುಭವವೇ ಗುರು
ಇದ ಗುರುತಿಸುವಂತಾಗಿಸಿದ ಗುರುಗಳೆಲ್ಲರಿಗೆ ಶರಣು
ಅಕ್ಷರದೊಳಗಿನ ಜ್ಞಾನ ಆತ್ಮಾನುಸಂಧಾನ
ಈ ಸ್ಥಾನದಿರವಿಂದ ಹೆಚ್ಚುವುದು ಆತ್ಮಾಭಿಮಾನ
ಬೇರೇನು ಬಯಸಿಲ್ಲ ಬುದ್ಧಿಗೆ ಹೆಚ್ಚಲಿ ಹಸಿವು
ಮುಗ್ಧತೆಯ ಜೊತೆಗಿರಲಿ ಮನವ ಮುಟ್ಟುವ ಒಲವು
ಆಗಸದ ಅಗಾಧತೆ ಅಲೆಯೊಳಗಿನ ಚಿಲುಮೆ
ಸಾಗರದ ಸಂಚಲನ ಅಂತರಂಗದ ಹಿರಿಮೆ
ಬಿದ್ದಲ್ಲೇ ಮತ್ತೆದ್ದು ನಾ ನಡೆದು ನಡೆಸುವೆನು
ನೀನಿತ್ತ ಪುಣ್ಯವಿದು ಶಿಕ್ಷಕಿಯಾಗಿರುವೆನು
ನಿನ್ನ ನೆರಳಲೆ ನಡೆದು ಧನ್ಯಳಾಗಿಹೆನು
ನಿನ್ನ ನೆರಳಲೆ ನಡೆದು ಧನ್ಯಳಾಗಿಹೆನು..
Dr Prajna Marapalli Assistant Professor Department of Kannada Sri Poornaprajna Evening College Udupi-576101