ವಿಶ್ವಏಡ್ಸ್‌ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ದಿನಾಂಕ 14-12-2023ನೇ ಗುರುವಾರ ನಮ್ಮ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್‌ ಕ್ರಾಸ್‌ ಘಟಕದ ಸಹಯೋಗದೊಂದಿಗೆ ವಿಶ್ವ ಏಡ್ಸ್‌ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶ್ರೀ ಮಹಾಬಲೇಶ್ವರ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಉಡುಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು ಏಡ್ಸ್‌ ನ ಬಗ್ಗೆ ಅದು ಬರುವ ಸಾಧ್ಯತೆಗಳ ಬಗ್ಗೆ, ಹೇಗೆ ತಡೆಗಟ್ಟಬಹುದೆಂದು ಸಂಕ್ಷಿಪ್ತವಾಗಿ ವಿವರಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್‌ ಕೆ ಶೇರಿಗಾರ್‌, ಡಾ. ಪ್ರಜ್ಞಾ ಮಾರ್ಪಳ್ಳಿ ವೇದಿಕೆಯಲ್ಲಿ ಹಾಗೂ ಡಾ. ರಾಘವೇಂದ್ರ ಎಲ್‌ ಸಂಯೋಜಕರು ಯುವ ರೆಡ್‌ ಕ್ರಾಸ್‌ ಘಟಕ ಉಪಸ್ಥಿತರಿದ್ದರು.

Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us