ಪೋಲಿಸ್‌ಠಾಣೆಗೆಭೇಟಿ (ತೆರೆದಮನೆ) 2023

ದಿನಾಂಕ 29-09-2023 ಶುಕ್ರವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಪೋಲಿಸ್‌ ಠಾಣೆಗೆ ಭೇಟಿಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅಲ್ಲಿನ ಪೋಲಿಸ್‌ ಅಧಿಕಾರಿಗಳು ಪೋಲಿಸ್‌ ಠಾಣೆಯನ್ನು ವಿಸ್ತಾರವಾಗಿ ಪರಿಚಯಿಸಿ ತಾವು ಉಪಯೋಗಿಸುವಂತಹ ಬೇಡಿ ಬಂದೂಕುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಪೋಲಿಸ್‌ ಠಾಣೆಗೆ ಹಾಗೂ ಅದರ ಕಾರ್ಯ ವೈಖರಿಗಳ ಬಗ್ಗೆ ಪಾರದರ್ಶಕವಾಗಿ ಹೇಳಿದರು. ನಂತರ ಅಲ್ಲಿನ ಮಹಿಳಾ ಅಧಿಕಾರಿಯು ನಮ್ಮ ಆಸುಪಾಸಿನಲ್ಲಿ ನಡೆಯುವ ಕೆಲವು ಘಟನೆಗಳ ಬಗ್ಗೆ ವಿವರಿಸಿ, ಮಹಿಳೆಯರ ರಕ್ಷಣೆಯ ಬಗ್ಗೆ ಹಾಗೆಯೇ ಅಸಭ್ಯ ರೀತಿಯಲ್ಲಿ ನಡೆದುಕೊಂಡರೆ ಯಾವ ರೀತಿಯ ಕೇಸ್‌ ಗಳನ್ನು ಹಾಕಬಹುದು, ಎಷ್ಟು ವರ್ಷಗಳ ಕಾಲ ಶಿಕ್ಷೆ, ದಂಡ ವಿಧಿಸಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು.

Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us