ಬಯಕೆಗಳ ಬೆಂಬತ್ತಿ
ಬೆನ್ನು ತೋರಿಸಿ ನಿಂತೆಯಾ?!
ಏನನ್ನೂ ಬಯಸದೆ
ಬಿಗುಮಾನ ಬಿಟ್ಟು ಬಂದವನ
ನೀ ಮರೆತೆಯಾ?
ಮರೆತೇನು ಎಂದರೆ
ಮರೆಯಲಾದೀತೇ ಮನಕೆ?
ಪ್ರೀತಿಯ ಪಾಠ ಕಲಿಸಿದವ ಆತ
ಜೀವನ ನೀಡಿದವ ಆತ
ಮನಸು ಬಿಟ್ಟೀತೇ ಅವನನ್ನು?
ಗುಪ್ತಗಾಮಿನಿಯಾಗಿ
ಹರಿದ ಭಾವನೆಗಳಿಗೆ
ತಡೆಗೋಡೆ ಕಟ್ಟದೆ
ತಪ್ಪು ಮಾಡಿದಳೇ ಆಕೆ?
ಈಗ ಪಶ್ಚಾತ್ತಾಪ ಪಡುತಿರುವಳೇ?
ಪಶ್ಚಾತ್ತಾಪಕ್ಕಿಂತ
ಅತೀ ದೊಡ್ಡ ಶಿಕ್ಷೆ ಬೇರೊಂದಿದೆಯೇ?
ಬದಲಾದ ಮನವೇ ತಾನೇ
ಅಂಗೂಲಿಮಾಲನನ್ನು
ಬುದ್ಧಿಹೀನನಿAದ ಬುದ್ಧನನ್ನಾಗಿಸಿದ್ದು
ಬುಧ್ಧಳಾಗುತ್ತಿರುವಳೇ ಆಕೆ
ಇಲ್ಲ, ಆಗಲೇ ಮನದೊಳು
ಇರುವ ಬುದ್ಧನ ಹುಡುಕಾಟದಲ್ಲಿರುವಳೇ?
ಹುಡುಕಿದರೆ ಸಿಗುವನೇ ಆತ?
ಬುದ್ಧ, ಕೃಷ್ಣ, ಕ್ರೆöÊಸ್ತ, ರಾಮ, ರಹೀಮ
ಕಾಳಿ, ಲಕ್ಷಿö್ಮ, ಸರಸ್ವತಿ, ಪಾರ್ವತಿ
ಎಲ್ಲರನ್ನೂ ತನ್ನಲ್ಲೇ ಕಂಡಳು
ಖಾಲಿ ಕಂಡರೆ ಸಾಕೇ?
ತಾನಾಗಬೇಡವ ಹಾಗೆ?
ಆಗುವ ಬಗೆ ಹೇಗೆ?
ಹಾಗಾದರೆ ಜೀವನೆವೆನ್ನುವುದು
ಒಂದರಿದ ಇನ್ನೊಂದಾಗುವುದೇ?
ಅಥವಾ
ತಾನು ಏನೇನೂ ಅಲ್ಲ ಎಂದು ಅರಿತು
ತಾನೇ ಆಗುವುದೇ?
ನಾನು ನಾನೇ ಆಗುವುದು
ಅಲ್ಲವೇ ಪರಮ ಸತ್ಯ!
ಆ ಸತ್ಯದ ಹುಡುಕಾಟದಲ್ಲಿ
ಈ ಬದುಕು ಎಂಬ ಪಯಣ
ನಿರಂತರ ಕೊನೆಯುಸಿರಿರುವತನಕ
Ms Jayashri Nayak Department of English Sri Poornaprajna Evening College, Udupi- 576101