ದಿನಾಂಕ 13-12-2023ನೇ ಬುಧವಾರ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗದ ಸಂಯೋಜನೆಯೊಂದಿಗೆ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವ್ಯವಸ್ಥೆಯೊಳಗಿರುವ ಎಲ್ಲಾ ಸಾಧ್ಯತೆಗಳು ಸಮಾಜದ ವ್ಯಕ್ತಿಗಳ ಏಳಿಗೆಗಾಗಿ ಮುಡಿಪಾಗಿರುವಂತಿರಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನ ರೂಪಗೊಂಡಿದೆ. ಶಿಕ್ಷಣ ಆರೋಗ್ಯ ವೃತ್ತಿ ಹೀಗೆ ಹಲವು ಸಂಗತಿಗಳಿಗೆ ಅನ್ವಯವಾಗುವಂತೆ ಅಚ್ಚುಕಟ್ಟಾದ ನಿಯಮಗಳನ್ನು ಜಾರಿಗೆ ತರುವ ಮೂಲಕ ಸಮಾನತೆಯ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಂವಿಧಾನ ಸ್ಥಾಪಿಸಲಾಯಿತು. ಇದರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅವರ ವ್ಯಕ್ತಿತ್ವ ವಿಶಿಷ್ಟವಾದದ್ದು ಎನ್ನುವುದಕ್ಕೆ ಅವರು ಕೆಜಿಎಫ್ ಗೆ ಭೇಟಿನೀಡಿ ಗಣಿ ಸಂಪತ್ತಿನ ಮೇಲೆ ಗಮನಿಸದೆ ಅಲ್ಲಿನ ಕಾರ್ಮಿಕರ ಅಭ್ಯುಯದಕ್ಕಾಗಿ ಕೈಗೊಂಡ ಕ್ರಮಗಳೇ ಸಾಕ್ಷಿ ಎಂದು ನಮ್ಮ ಕಾಲೇಜಿನ ಗ್ರಂಥಪಾಲಕರಾದ ಶ್ರೀ ಅನಿಲ್ ಕುಮಾರ್ ಜೆ ಅವರು ಅಭಿಪ್ರಾಯಪಟ್ಟರು ಹಾಗೆಯೇ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ ಅವರು ವಹಿಸಿಕೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕರಾದ ಪೂರ್ಣಿಮಾ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ ಶೇರಿಗಾರ್, ಡಾ. ಪ್ರಜ್ಞಾ ಮಾರ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ಡಾ. ಪ್ರಜ್ಞಾ ಮಾರ್ಪಳ್ಳಿ ಅವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ನಡೆದ ಸಂವಿಧಾನದ ಕುರಿತಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.