ದಿನಾಂಕ 27-09-2023ನೇ ಬುಧವಾರ ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ ಉಡುಪಿ ನಗರ ಸಭೆ, ಉಡುಪಿ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ “ವಿಶ್ವ ಪ್ರವಾಸೋದ್ಯಮ ದಿನಾಚಾರಣೆಯ” ಅಂಗವಾಗಿ “ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು” ಎಂಬ ಸಂದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚಾರಣೆಯನ್ನು ಪುರಭವನ (ಟೌನ್ ಹಾಲ್), ಅಜ್ಜರಕಾಡು, ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 9:45ಕ್ಕೆ ಆಚರಿಸಲಾಯಿತು. ವಿವಿಧ ಕಾಲೇಜಿನಿಂದ ಹಲವಾರು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮ ಬರೀ ಪ್ರವಾಸೋದ್ಯಮ ಕುರಿತಲ್ಲದೇ, ಹಲವಾರು ವಿಶೇಷ ಕಾರ್ಯಕ್ರಮಗಳು ಸಹ ಇದ್ದವು. ಮುಖ್ಯವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡದ ಸುತ್ತಮುತ್ತಲಿರುವ ಸರಿಸುಮಾರು 85 ಪ್ರವಾಸಿ ತಾಣಗಳ ಬಗ್ಗೆ ಇರುವ ಪುಸ್ತಕ ಬಿಡುಗಡೆಯು ಕೇಂದ್ರಬಿಂದಾಗಿತ್ತು. ಅಂತೆಯೇ ಕರಾವಳಿಯ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಒಳ್ಳೆಯ ವ್ಲೊಗ್ ಮಾಡುತ್ತಿದ್ದ ವ್ಲೋಗರ್ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಷ್ಟಲ್ಲದೇ ಕರಾವಳಿಯಲ್ಲಿ ಇರುವಂತಹ ಅದ್ಭುತ ಸ್ಥಳಗಳ ಪರಿಚಯ ಮಾಡಿಕೊಟ್ಟರು. ಹಾಗೆಯೇ ಈ ಕಾರ್ಯಕ್ರಮಕ್ಕೆ ಸಂಬಂಧಿತ ಮೊದಲೇ ಹಲವಾರು ಸ್ಪರ್ಧೆಗಳನ್ನು ನಡೆಸಿದ್ದು ಅದರ ಬಹುಮಾನ ವಿತರಣೆಯನ್ನು ಮಾಡಲಾಯಿತು. ಇದಾದ ಬಳಿಕ ನಮ್ಮ ತುಳುನಾಡಿನ ಕಲಾವೈಭವನ್ನು ಸವಿರುಚಿಯಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಇದಾದ ನಂತರ ಮಧ್ಯಾಹ್ನದ ಭರ್ಜರಿ ಭೋಜನದ ನಂತರ ಈ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ ನೀಡಲಾಯಿತು. ನಮ್ಮ ಕಾಲೇಜಿನ ಸ್ವಯಂಸೇವಕರು ಸಹ ಪಾಲ್ಗೊಂಡಿದ್ದು, 40 ಸ್ವಯಂಸೇವಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಕಂಡುಕೊಂಡರು.
Blog
ಪ್ರವಾಸೋದ್ಯಮ ಮತ್ತು ಹಸಿರುಹೂಡಿಕೆ
Share on facebook
Share on linkedin
Share on whatsapp
Explore
Related Articles
SPEC Achieves NAAC ‘A’ Grade in 4th Cycle of Assessment
June 11, 2024
Institution Awarded ‘A’ Grade by NAAC
June 7, 2024
Subscribe to Newsletter
Contact Us
Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com
Important Links
- Academic
- News and Events
- Staff
- List Item