ದಿನಾಂಕ 10-11-2023 ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಕುತ್ಪಾಡಿ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಆಯುರ್ವೇದ ದಿವಸದ ಅಂಗವಾಗಿ ಕಾಲೇಜಿನ ಆಸು – ಪಾಸಿನ ವಾತವರಣದಲ್ಲಿ ಜೌಷಧಿಯ ಗಿಡಗಳನ್ನು ನೆಡುವ ಹಾಗೂ ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಡಾ. ಸುಮ ಮಲ್ಯ, ಎಸ್.ಡಿ.ಎಂ ಕಾಲೇಜು ಆಫ್ ಆಯುರ್ವೆದ ಕುತ್ಪಾಡಿ ಅವರು ಭಾಗವಹಿಸಿ ಸ್ವಚ್ಛ ಗಾಳಿಯಿಂದ ನಮಗೆ ಉತ್ತಮ ಆರೋಗ್ಯ ದೊರಕುತ್ತದೆ. ಹಾಗೆಯೇ ನಾವು ವಾಸಿಸುವ ವಾತವರಣಗಳಲ್ಲಿ ಜೌಷಧಿಯ ಗಿಡಗಳನ್ನು ನೆಡುವುದರಿಂದ ನಮಗೂ ಹಾಗೂ ನಮ್ಮ ಪರಿಸರಕ್ಕೂ ಒಳ್ಳೆಯದು ಎಂಬ ತಮ್ಮ ಮಾತುಗಳನ್ನು ಹಂಚಿಕೊಂಡರು ಹಾಗೆಯೇ ಡಾ. ತೇಜಸ್ವಿನಿ ನಾಯಕ್ ಸಹ ಪ್ರಾಧ್ಯಾಪಕರು, ಎಸ್.ಡಿ.ಎಂ. ಕಾಲೇಜು ಆಫ್ ಆಯುರ್ವೇದದ, ಕುತ್ಪಾಡಿ ಅವರು ಸಹ ಭಾಗಹಿಸಿದ್ದರು.
ಹಾಗೆಯೇ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ ಇವರು ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ. ಚಿರಂಜನ್ ಕೆ ಶೇರಿಗಾರ್ ಹಾಗೂ ಡಾ. ಪ್ರಜ್ಞಾ ಮಾರ್ಪಳ್ಳಿ ಹಾಗೂ ಇಕೋ ಕ್ಲಬ್ ನ ಸಂಯೋಜಕರಾದ ಶ್ರೀ ನಾಗರಾಜ್ ಆಚಾರ್ಯ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ವಿನಾಯಕ್ ಪೈ ಬಿ ಅವರು ಬಂದ ಅತಿಥಿಗಳಿಗೆ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.