World Sparrow Day at SPEC- Lets make a difference
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡ್ರಾಪ್ಲೆಟ್ಸ್ ಫಾರ್ ಡೈವರ್ಸಿಟಿ ಎಂಬ ಕಾರ್ಯಕ್ರಮದ ಮೂಲಕ ಪಕ್ಷಿಗಳಿಗೆ ನೀರು ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಕಾಲೇಜಿನ ವಿದ್ಯಾರ್ಥಿಗಳೇ ತೆಂಗಿನ ಚಿಪ್ಪಿನ ಗೆರಟೆಯಿಂದ ಪಕ್ಷಿಗಳಿಗೆ ನೀರು ಕುಡಿಯಲು ಅವಕಾಶವಾಗುವಂತೆ ಉಪಕರಣಗಳನ್ನು ಮಾಡಿ ಅದನ್ನು ಕಾಲೇಜಿನ ಕ್ಯಾಂಪಸ್ಸಿನ ಸುತ್ತಲೂ ಮರಗಳಿಗೆ ಕಟ್ಟಿ ಈ ಸುಡುವ ಬಿಸಿ ಬೇಸಿಗೆಯಲ್ಲಿ ಪಕ್ಷಿಗಳ ದಾಹ ತೀರಿಸುವ ಒಂದು ಸಣ್ಣ ಪ್ರಯತ್ನದತ್ತ ಹೆಜ್ಜೆ ಇಟ್ಟಿದ್ದಾರೆ.
ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಉಡುಪಿಯ ಕಂಡಿರಾ ಮಾಧ್ಯಮದ ನಿರ್ವಾಹಕರಾದ ಮಂಜುನಾಥ್ ಕಾಮತ್ ಅವರು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಕನ್ಯಾ ಮೇರಿ ಜೆ,ಉಪ ಪ್ರಾಂಶುಪಾಲರಾದ ವಿನಾಯಕ್ ಪೈ,ಇಕೋ ಕ್ಲಬ್ ಸಂಯೋಜಕರಾದ ನಾಗರಾಜ್ ಆಚಾರ್,ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ್ ಇದರ ಉಡುಪಿ ಜಿಲ್ಲಾ ಸಂಚಾಲಕರಾದ ಭೂಷಣ್ ಕುಮಾರ್,ಕಾರ್ಯದರ್ಶಿ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.